ಶ್ರೀ:
ಶ್ರೀಮತೇ ರಾಮಾನುಜಾಯ ನಮಃ
ಶ್ರೀಮತೇ ವರವರಮುನಯೇ ನಮಃ
ಶ್ರೀ ವನಾಚಲ ಮಹಾಮುನಯೇ ನಮಃ
ಹಿಂದಿನ ಲೇಖನದಲ್ಲಿ (https://guruparamparai.koyil.org/2021/02/22/pillai-lokacharyar-kannada/) ನಾವು ಪಿಳ್ಳೈ ಲೋಕಾಚಾರ್ಯ ಅವರ ಬಗ್ಗೆ ಚರ್ಚಿಸಿದ್ದೇವೆ. ಈಗ ನಾವು ಓರಾಣ್ ವೞಿ ಗುರು ಪರಂಪರೈನಲ್ಲಿ ಮುಂದಿನ ಅಚಾರ್ಯರ ಬಗ್ಗೆ ನೋಡೋಣ.
ತಿರುವಾಯ್ಮೊೞಿ ಪಿಳ್ಳೈ -ಕುಂತೀ ನಗರಂ (ಕೊಂತಗೈ)
ತಿರುನಕ್ಷತ್ರ : ವೈಕಾಶಿ (ವೈಶಾಖ ಮಾಸ), ವಿಶಾಕ
ಅವತಾರ ಸ್ಥಳ : ಕುಂತಿ ನಗರ, ಕೊಂತಗೈ
ಆಚಾರ್ಯರು : ಪಿಳ್ಳೈ ಲೋಕಾಚಾರ್ಯ
ಶಿಷ್ಯರು : ಅೞಗಿಯ ಮಣವಾಳ ಮಾಮುನಿಗಳ್, ಶಠಗೋಪ ಜೀಯರ್(ಭವಿಷ್ಯದಾಚಾರ್ಯನ್ ಸನ್ನಿಧಿ), ತತ್ವೇಶ ಜೀಯರ್ ಇತ್ಯಾದಿ.
ಅವರು ಪರಮಪದವನ್ನು ಪಡೆದ ಸ್ಥಳ: ಆೞ್ವಾರ್ ತಿರುನಗರಿ.
ಕೃತಿಗಳು : ಪೆರಿಯಾೞ್ವಾರ್ ತಿರುಮೊೞಿ ಸ್ವಾಪದೇಶಂ
ತಿರುಮಲೈ ಆೞ್ವಾರ್ ಆಗಿ ಜನಿಸಿದ ಅವರನ್ನು ಶ್ರೀಶೈಲೇಶರ್, ಶಟಠಗೋಪ ದಾಸರ್ ಎಂದು ಕರೆಯಲಾಗುತ್ತಿತ್ತು ಮತ್ತು ಅಂತಿಮವಾಗಿ ನಮ್ಮಾೞ್ವಾರ್ ಅವರ ತಿರುವಾಯ್ಮೊೞಿ ಮೇಲಿನ ಆಸಕ್ತಿ ಮತ್ತು ಪ್ರಸರಣದಿಂದಾಗಿ ಅವರು ತಿರುವಾಯ್ಮೊೞಿ ಪಿಳ್ಳೈ ಎಂದು ಪ್ರಸಿದ್ಧರಾಗಿದ್ದರು.
ಚಿಕ್ಕ ವಯಸ್ಸಿನಲ್ಲೇ ಅವರ ಪಂಚಸಂಸ್ಕಾರವನ್ನು ತಮ್ಮ ಆಚಾರ್ಯರಾದ ಪಿಳ್ಳೈ ಲೋಕಾಚಾರ್ಯರ ಕಮಲ ಪಾದಗಳಲ್ಲಿ ಮಾಡಲಾಯಿತು.ಅವರು ತಮಿಳಿನಲ್ಲಿ ಉತ್ತಮ ವಿದ್ವಾಂಸರಾಗಿದ್ದರು ಮತ್ತು ಉತ್ತಮ ಆಡಳಿತಗಾರರೂ ಆಗಿದ್ದರು. ಮದುರೈ ಸಾಮ್ರಾಜ್ಯದ ರಾಜನು ಚಿಕ್ಕ ವಯಸ್ಸಿನಲ್ಲಿಯೇ ತಿರುಮಲೈ ಆೞ್ವಾರ್ ಅವರ ಆರೈಕೆಯಲ್ಲಿ ತನ್ನ ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಮರಣಹೊಂದಿದನು.ಆದ್ದರಿಂದ, ಅವರು ಸಂಪ್ರದಾಯದಿಂದ ದೂರವಾಗಿ ಮದುರೈ ಸಾಮ್ರಾಜ್ಯದ ಮುಖ್ಯ ಸಲಹೆಗಾರರಾದರು.ನಂತರ ಕೂರಕುಲೋತ್ತಮ ದಾಸರ್ ತಿರುಮಲೈ ಆೞ್ವಾರ್ ಅನ್ನು ಸುಧಾರಣೆ ಮಾಡಲು ಭೇಟಿಯಾದರು. ಆ ಸಮಯ ( ಮುಸ್ಲಿಂ ದರೊಡೆಯ ಸ್ವಲ್ಪ ಸಮಯದ ನಂತರ ) ನಮ್ಮಾೞ್ವಾರ್ ಆೞ್ವಾರ್ ತಿರುನಗರಿಯಿಂದ ಹೊರಟು ಕೋೞಿಕೋಡ್ನಲ್ಲಿ ನಂಪೆರುಮಾಳ್ ಜೊತೆ ಸ್ವಲ್ಪ ಸಮಯ ಇದ್ದರು . ಆದರೆ ಸ್ಥಳೀಯ ಜನರ ನಡುವಿನ ಕೆಲವು ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಅಲ್ಲಿಂದ ನಂಪೆರುಮಾಳ್ ಹೊರಟುಹೋದಾಗ, ಆೞ್ವಾರ್ ಅವರೊಂದಿಗೆ ಪ್ರಯಾಣಿಸುವುದಿಲ್ಲ. ಆ ಸಮಯ ಕಳ್ಳರ ಭಯದಿಂದ ಒಂದು ಪೆಟ್ಟಿಗೆಯಲ್ಲಿ ಆೞ್ವಾರನ್ನು ಇತ್ತು ನೈಋುತ್ಯ ದಿಕ್ಕಿನ ಗುಡ್ಡಗಳಲಿ ಒಂದು ಬಂಡೆಯ ಕೆಳಗೆ ಸುರಕ್ಷಿತವಾಗಿ ಇರಿಸಲಾಯಿತು.
ಕೆಲವು ದಿನಗಳ ನಂತರ, ನಮ್ಮಾೞ್ವಾರ್ ಅವರಿಗೆ ಬಹಳ ಲಗತ್ತಿಸಿದ್ದ ತೋೞಪ್ಪರ್ ಎಂಬ ಶ್ರೀವೈಷ್ಣವರು ತಿರುಮಲೈ ಆೞ್ವಾರ್ ಬಳಿ ಬಂದು, ನಮ್ಮಾೞ್ವಾರನ್ನು ರಕ್ಷಿಸಲು ಒಂದು ಸೈನಿಕರ ಗುಂಪಿಗಾಗಿ ವಿನಂತಿಸಿದರು. ತಿರುಮಲೈ ಆೞ್ವಾರ್ ಸಂತೋಷದಿಂದ ಅದನ್ನೇ ಆಯೋಜಿಸಿರು ಮತ್ತು ತೋೞಪ್ಪರ್ ಸೈನಿಕರನ್ನು ಬಂಡೆಗೆ ಮಾರ್ಗದರ್ಶನ ಮಾಡುತ್ತಾರೆ. ಬಂಡೆಯಿಂದ ಕೆಳಗಿಳಿಯಲು ಎಲ್ಲರೂ ಹೆದರುತ್ತಿದ್ದರು. ಆದರೆ ತೋೞಪ್ಪರ್ ಸ್ವತಃ ತಾನೇ ಕೆಳಗೆ ಹೋದರು. ಆ ಸಮಯದಲ್ಲಿ, ಆೞ್ವಾರ್ ತಿರುನಗರಿಯ ಶ್ರೀವೈಷ್ಣವರು ತೋೞಪ್ಪರ್ ಅನ್ನು ಬಹಳ ಮೆಚ್ಚುತ್ತಾರೆ ಮತ್ತು ಆ ದಿನದಿಂದ ತನ್ನ ಪ್ರಯತ್ನಗಳಿಗಾಗಿ ಆೞ್ವಾರ್ ಅವರಿಂದ ವಿಶೇಷ ಮರಿಯಾದೆ / ಪ್ರಸಾದ ಪಡೆಯುವರು ಎಂದು ಹೇಳುತ್ತಾರೆ. ಅವರು, ಭಾರವಾದ ವಸ್ತುಗಳನ್ನು ಎತ್ತುವ ಉಪಕರಣದ ಸಹಾಯದಿಂದ ಇಳಿದು, ನಮ್ಮಾೞ್ವಾರ್ ಸುರಕ್ಷಿತವಾಗಿ ಇರಿಸಿ ಅವರನ್ನು ಮೇಲಕ್ಕೆ ಕಳುಹಿಸುತ್ತಾರೆ. ಎರಡನೇ ಬಾರಿಗೆ ತೋೞಪ್ಪರ್ ಅವರನ್ನು ಕರೆದುಕೊಂಡು ಬರಲು ಅದನ್ನು ಕಳುಹಿಸಿದಾಗ, ಅವರು ಜಾರಿ ಬಂಡೆಯ ಕೆಳಗೆ ಬಿದ್ದು ತಕ್ಷಣವೇ ಪರಮ ಪದವನ್ನು ಪಡೆದರು. ಆಗ, ನಮ್ಮಾೞ್ವಾರ್ ಅವರು ತೋೞಪ್ಪರ ಮಗನನ್ನು ಸಮಾಧಾನಗೊಳಿಸಿ ,ಅವನಿಗೆ ಇನ್ನು ಮುಂದೆ ತಾನೇ ತಂದೆಯ ಸ್ಥಾನದಲ್ಲಿರುತ್ತಾರೆಂದು ಹೇಳಿದರು. ಹೀಗಾಗಿ, ತೋೞಪ್ಪನ ಪ್ರಯತ್ನ ಹಾಗು ತಿರುಮಲೈ ಆೞ್ವಾರ್ ಅವರ ಸಹಾಯದಿಂದ ನಮ್ಮಾೞ್ವಾರ್ರನ್ನು ತಿರುಕ್ಕಣಾಂಬಿಗೆ ಮರಳಿ ಕರೆತಂದು ಅವರು ಅಲ್ಲಿಯೇ ಇದ್ದರು .
ಈಗ ತಿರುಮಲೈ ಆೞ್ವಾರ್ ಬಗ್ಗೆ ನೋಡೋಣ.
ಒಮ್ಮೆ ತಿರುಮಲೈ ಆೞ್ವಾರ್ ಅವರು ಪಲ್ಲಕ್ಕಿಯಲ್ಲಿ ತನ್ನ ದಿನಚರಿ ಸುತ್ತುಗಳನ್ನು ಮಾಡುತ್ತಿರುವಾಗ, ‘ಆೞ್ವಾರ್ ತಿರುವಿರುತ್ತಮ್’ ಪಠಿಸುತ್ತಿದ್ದ ಕೂರ ಕುಲೋತ್ಥಮ ದಾಸರ್ ಅವರನ್ನು ನೋಡಿದರು. ತಿರುಮಲೈ ಆೞ್ವಾರ್ ಅವರು ಪಿಳ್ಳೈ ಲೋಕಾಚಾರ್ಯರ ಆಶೀರ್ವಾದವನ್ನು ಹೊಂದಿದ್ದರಿಂದ ,ದಾಸರವರ ಹಿರಿಮೆಯನ್ನು ತಕ್ಷಣ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಅವರು ಪಲ್ಲಕ್ಕಿಯಿಂದ ಕೆಳಗಿಳಿದು ತಿರುವಿರುತ್ತಮ್ ಪ್ರಬಂಧದ ಅರ್ಥವನ್ನು ವಿವರವಾಗಿ ಕಲಿಸುವಂತೆ ದಾಸರ್ ಅವರನ್ನು ವಿನಂತಿಸಿದರು. ಆದರೆ ದಾಸರ್ ಅವರಿಗೆ ಅರ್ಥಗಳನ್ನು ಕಲಿಸುವುದಿಲ್ಲ ಎಂದು ನಿರಾಕರಿಸಿ ಅವರ ಮುಖದ ಮೇಲೆ ಉಗುಳುತ್ತಾರೆ. ತಿರುಮಲೈ ಆೞ್ವಾರ್ ಅವರು ಸಾತ್ವಿಕರಾಗಿದ್ದರಿಂದ, ಅವರು ತಮ್ಮ ಸೇವಕರಿಂದ ದಾಸರಿಗೆ ಹಾನಿಯಾಗುವುದನ್ನು ನಿಲ್ಲಿಸಿದರು. ಮತ್ತು ಆಲ್ಲಿಂದ ಹೊರಟರು. ನಂತರ ಅವರು ತಮ್ಮ ಸಾಕು-ತಾಯಿಗೆ ಈ ಘಟನೆಯನ್ನು ತಿಳಿಸಿದಾಗ, ಅವರ ತಾಯಿ ತಿರುಮಲೈಆೞ್ವಾರ್ ಮತ್ತು ಪಿಳ್ಳೈ ಲೋಕಾಚಾರ್ಯರ ಸಂಬಂಧದ ಬಗ್ಗೆ ನೆನಪಿಸಿದರು. ತಿರುಮಲೈ ಆೞ್ವಾರ್ ಅವರು ಗ್ರಹಿಸದೆ ಇರುವುದನ್ನು ತಕ್ಷಣವೇ ಅರಿದುಕೊಳ್ಳುತ್ತಾರೆ ಮತ್ತು
ಅದಕ್ಕಾಗಿ ಭಾಸವಾಗುತ್ತಾರೆ. ಇನ್ನೊಂದು ಸಾರಿ ತಿರುಮಲೈ ಆೞ್ವಾರ್ ಆನೆಯ ಮೇಲೆ ಪ್ರಯಾಣಿಸುತ್ತಿದ್ದಾಗ, ದಾಸರನ್ನು ನೋಡಿದರು. ಈ ಸಮಯದಲ್ಲಿ ಅವರು ತಕ್ಷಣ ಕೆಳಗಿಳಿದು ದಾಸರ ಕಮಲದ ಪಾದದಲ್ಲಿ ಧೀರ್ಘ ದಂಡ ನಮಸ್ಕಾರ ಮಾಡುತ್ತಾರೆ. ದಾಸರು ಅವರನ್ನು ಸ್ವೀಕರಿಸಿ ಅವರಿಗೆ ಎಲ್ಲಾ ಅರ್ಥಗಳನ್ನು ಕಲಿಸಲು ಒಪ್ಪುತ್ತಾರೆ.
ತಿರುಮಲೈ ಆೞ್ವಾರ್ ನಿರ್ದಿಷ್ಟವಾಗಿ ದಾಸರಿಗಾಗಿ ಒಂದು ಅಗ್ರಹಾರವನ್ನು ಸ್ಥಾಪಿಸಿ ತಿರುವಾರಾಧನೆಗಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಾರೆ. ಆಡಳಿತಾತ್ಮಕ ಚಟುವಟಿಕೆಗಳಲ್ಲಿ ಅವರು ಹೆಚ್ಚು ಕಾರ್ಯನಿರತರಾಗಿರುವುದರಿಂದ, ತಿರುಮಲೈ ಆೞ್ವಾರ್ ಅವರು ಪ್ರತಿದಿನ ತಮ್ಮನ್ನು ಭೇಟಿ ಮಾಡುವಂತೆ ದಾಸರ್ ಅವರನ್ನು ವಿನಂತಿಸುತ್ತಾರೆ. ದಾಸರು ಒಪ್ಪಿಕೊಂಡರು. ದಾಸರು ಮೊದಲ ಬಾರಿಗೆ ತಿರುಮಲೈ ಆೞ್ವಾರನ್ನು ಭೇಟಿಯಾಗಲು ಹೋದಾಗ, ತಿರುಮಲೈ ಆೞ್ವಾರ್ ಅವರು ಪಿಳ್ಳೈ ಲೋಕಾಚಾರ್ಯರ ತನಿಯನ್ ಅನ್ನು ಪಠಿಸಿಕೊಂಡು ತಿರುಮಣ್ ಕಾಪು( ನಾಮ) ಅನ್ವಯಿಸುವುದನ್ನು ಗಮನಿಸಿ ಬಹಳ ಸಂತೋಷ ಪಟ್ಟರು. ಅಲ್ಲಿಂದೀಚೆಗೆ ಅವರು ಪಿಳ್ಳೈ ಲೋಕಾಚಾರ್ಯರಿಂದ ಕಲಿತ ಎಲ್ಲಾ ಜ್ಞಾನವನ್ನು ನಿಯಮಿತವಾಗಿ ತಿರುಮಲೈ ಆೞ್ವಾರ್ ಅವರಿಗೆ ಕಲಿಸಿದರು.
ಒಮ್ಮೆ ತಿರುಮಲೈ ಆೞ್ವಾರ್ ಅವರು ಕಾರ್ಯನಿರತರಾಗಿದ್ದಾಗ ತರಗತಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆಗ, ದಾಸರು ಬರುವುದನ್ನು ನಿಲ್ಲಿಸಿ ಬಿಟ್ಟರು. ನಂತರ ತಿರುಮಲೈ ಆೞ್ವಾರ್ ದಾಸರನ್ನು ಭೇಟಿ ಮಾಡಿ ಅಪರಾಧ ಕ್ಷಮೆ ಕೇಳಿದಾಗ,ದಾಸರು ಸ್ವೀಕರಿಸಿ ಅವರಿಗೆ ಶೇಷ ಪ್ರಸಾದವನ್ನು ಕೊಟ್ಟರು. ಅಂದಿನಿಂದ, ತಿರುಮಲೈ ಆೞ್ವಾರ್ ಅವರು ಲೌಕಿಕ ಜೀವನದಲ್ಲಿ ವೈರಾಗ್ಯಗೊಂಡರು, ಅಧಿಕಾರಗಳನ್ನು ಯುವ ರಾಜಕುಮಾರನಿಗೆ ರ್ವರ್ಗಾಯಿಸಿ ರಾಜ್ಯವನ್ನು ತೊರೆದು ದಾಸರ್ ಅವರೊಂದಿಗೆ ಸದಾ ಕಾಲ ಇದ್ದರು.
ದಾಸರು ತಮ್ಮ ಅಂತಿಮ ದಿನಗಳಲ್ಲಿ ತಿರುಮಲೈ ಆೞ್ವಾರ್ಗೆ ತಿರುವಾಯ್ಮೊೞಿ ಯನ್ನು ವಿವರವಾಗಿ ಕಲಿಯಲು ತಿರುಕಣ್ಣಂಗುಡಿ ಪಿಳ್ಳೈ ಮತ್ತು ರಹಸ್ಯ ಅರ್ಥಗಳನ್ನು ವಿಳಂಜೊಲೈ ಪಿಳ್ಳೈ ಅವರ ಬಳಿ ಹೋಗಿ ಕಲಿಯಬೇಕೆಂದು ಸೂಚನೆ ನೀಡಿದರು ಮತ್ತು ನಮ್ಮ ಸಂಪ್ರದಾಯದ ನಾಯಕನಾಗಿ ತಿರುಮಲೈ ಆೞ್ವಾರನ್ನು ನೇಮಿಸಿದರು.ದಾಸರು ಪರಮ ಪದವನ್ನು ಪಡೆದರು. ತಿರುಮಲೈ ಆೞ್ವಾರ್ ಅವರು ಪಿಳ್ಳೈ ಲೋಕಾಚಾರ್ಯರ ಧ್ಯಾನ ಮಾಡುತ್ತಾ ದಾಸರ ಎಲ್ಲಾ ಚರಮ ಕೈಂಕರ್ಯಗಳನ್ನು ಭವ್ಯವಾಗಿ ಮಾಡಿದರು.
ತಿರುಮಲೈ ಆೞ್ವಾರ್ ತಿರುಕಣ್ಣಂಗುಡಿ ಪಿಳ್ಳೈ ಬಳಿಗೆ ಹೋಗಿ ತಿರುವಾಯ್ಮೊೞಿ ಕಲಿಯಲು ಪ್ರಾರಂಭಿಸುತ್ತಾರೆ. ತಿರುಕಣ್ಣಂಗುಡಿ ಪಿಳ್ಳೈ ಅವರಿಗೆ ಸಾರವನ್ನು ಕಲಿಸುತ್ತಾರೆ. ತಿರುಮಲೈ ಆೞ್ವಾರ್ ಒಂದೊಂದು ಪದಗಳ ಅರ್ಥವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಆಗ, ಪಿಳ್ಳೈ ಅವರನ್ನು ತಿರುಪ್ಪುಟ್ಕುೞಿ ಜೀಯರ್ ಹತ್ತಿರ ಕಳುಹಿಸುತ್ತಾರೆ. ತಿರುಮಲೈ ಆೞ್ವಾರ್ ತಿರುಪ್ಪುಟ್ಕುೞಿಗೆ ಹೋಗುತ್ತಾರೆ, ಆದರೆ ದುರದೃಷ್ಟದಿಂದ ಜೀಯರವರಿಂದ ಕಲಿಯಲು ಸಾಧ್ಯವಾಗಲಿಲ್ಲ ಏಕೆಂದರೆ, ಜೀಯರವರು ತಿರುಮಲೈ ಆೞ್ವಾರ್ ತಲುಪುವದಕ್ಕೆ ಸ್ವಲ್ಪ ಸಮಯದ ಮುನ್ನ ಪರಮ ಪದವನ್ನು ಪಡೆದರು. ತಿರುಮಲೈ ಆೞ್ವಾರ್ ತುಂಬಾ ಅಸಮಾಧಾನಗೊಂಡರು . ನಂತರ ಅವರು ದೇವ ಪೆರುಮಾಳ್( ಕಾಂಚೀ ವರದರಾಜ) ನಿಗೆ ಮಂಗಳಾಶಾಸನ ಮಾಡಲು ನಿರ್ಧರಿಸಿದರು. ಅವರನ್ನು ಅಲ್ಲಿನ ಪ್ರತಿಯೊಬ್ಬರೂ ಸ್ವಾಗತಿಸಲಾಯಿತು ಮತ್ತು ದೇವ ಪೆರುಮಾಳ್ ತನ್ನ ಶ್ರೀ ಶಠಗೊಪ ಮಾಲೆ ಮತ್ತು ಶಾಟ್ರುಪಡಿ ಇತ್ಯಾದಿಗಳನ್ನು ಅವರಿಗೆ ಕೊಟ್ಟರು. ಆ ಸಮಯದಲ್ಲಿ ನಾಲೂರು ಪಿಳ್ಳೈ ಸಹ ಸನ್ನಿಧಿಯಲ್ಲಿ ಉಪಸ್ಥಿತರಿದ್ದರು. (ಸೂಚನೆ:
ನಂಪಿಳ್ಳೈ ಈಡು ವ್ಯಾಖ್ಯಾನವನ್ನು ಈಯುಣ್ಣಿ ಮಾಧವ ಪೆರುಮಾಳ್ ಅವರಿಗೆ ನೀಡಿದರು:
ಈಯುಣ್ಣಿ ಮಾಧವ ಪೆರುಮಾಳ್ ಅವರು ಅದನ್ನು ತಮ್ಮ ಮಗ ಈಯುಣ್ಣಿ ಪದ್ಮನಾಭ ಪೆರುಮಾಳ್ ಅವರಿಗೆ ಕಲಿಸಿದರು.ಈಯುಣ್ಣಿ ಪದ್ಮನಾಭ ಪೆರುಮಾಳ್ ಅವರ ನೇರ ಶಿಷ್ಯರಾಗಿದ್ದರು.ಅವರು ಈಡು ವ್ಯಾಖ್ಯಾನವನ್ನು ಸಂಪೂರ್ಣವಾಗಿ ಕಲಿತಿದ್ದರು ಮತ್ತು ಅವರ ಮಗನಾದ ನಾಲೂರ್ ಆಚ್ಜಾನ್ ಪಿಳ್ಳೈಗೆ ಸಹ ಇದನ್ನುಕಲಿಸಿದರು.) ದೇವ ಪೆರುಮಾಳ್ ಅವರು ನಾಲೂರ್ ಪಿಳ್ಳೈ ಅವರಿಗೆ ನೇರವಾಗಿ ಮಾತನಾಡಿದರು “ನಾನು ಪಿಳ್ಳೈಲೋಕಾಚಾರ್ಯರ ರೂಪದಲ್ಲಿ ಜೋತಿಷಕುಡಿಯಲ್ಲಿ ಹೇಳಿದಂತೆ ನೀವು ತಿರುಮಲೈ ಆೞ್ವಾರ್ ಅವರು ತಿರುಪುಟ್ಕುೞಿ ಜೀಯರಿಂದ ಕಲಿತುಕೊಳ್ಳಲಾಗದಂತಹ ಅರುಳಿಚೆಯ್ಯಲ್ಗಳ್ಳಿನ ಎಲ್ಲಾ ಅರ್ಥಗಳನ್ನು ಮತ್ತು ತಿರುವಾಯ್ಮೊೞಿ ಯ ಈಡು ವ್ಯಾಖ್ಯಾನವನ್ನು ಕಲಿಸಬೇಕು” . ಅದನ್ನು ಕೇಳಿದ ನಾಲೂರ್ ಪಿಳ್ಳೈ ತಾನು ಅದನ್ನು ಮಾಡಲು ಅದೃಷ್ಟವಂತರೆಂದು ಭಾವಿಸುತ್ತಾರೆ, ಆದರೆ ಅವರ ವೃದ್ಧಾಪ್ಯವು ತಡೆಯಾಗಿರುವುದರಿಂದ, ತಿರುಮಲೈ ಆೞ್ವಾರ್ ಅವರಿಗೆ ಸರಿಯಾಗಿ ಕಲಿಸಲು ಸಾಧ್ಯವಿಲ್ಲವೆಂದು ತಿಳಿಸುತ್ತಾರೆ. ಆಗ, ದೇವ ಪೆರುಮಾಳ್ ಹೇಳುತ್ತಾರೆ “ನಿಮ್ಮ ಮಗ ನಾಲೂರ್ ಆಚ್ಜಾನ್ ಪಿಳ್ಳೈ ಅವರು ಕಲಿಸಿದರೆ, ನೀವು ಕಲಿಸಿದ ಹಾಗೆಯೇ ಆಗುತ್ತದೆ. ಅವರನ್ನು ಈ ದೈವಿಕ ಆದೇಶವನ್ನು ಸ್ವೀಕರಿಸಲು ತಿಳಿಸಿ. ” . ನಾಲೂರು ಪಿಳ್ಳೈ ಅವರು ತಿರುಮಲೈ ಆೞ್ವಾರ್ ಅವರನ್ನು ಬಹಳ ಸಂತೋಷದಿಂದ ಸ್ವೀಕರಿಸಿದರು ಮತ್ತು ಅವರನ್ನು ನಾಲೂರ್ ಆಚ್ಜಾನ್ ಪಿಳ್ಳೈ ಬಳಿಗೆ ಕರೆತರುತ್ತಾರೆ ಮತ್ತು ಇತರ ಅರುಳಿಚೆಯಲ್ ಅರ್ಥಗಳೊಂದಿಗೆ ಈಡು ಕಲಿಸಲು ಸೂಚಿಸುತ್ತಾರೆ.
ನಾಲೂರ್ ಆಚ್ಜಾನ್ ಪಿಳ್ಳೈ ( ದೇವರಾಜರ್ ಎಂದು ಸಹ ಕರೆಯಲಾಗುತ್ತಾರೆ)ಅವರು ತಿರುಮಲೈ ಆೞ್ವಾರ್ ಅವರಿಗೆ ಅರ್ಥಗಳನ್ನು ಬೋಧನೆ ಮಾಡುತ್ತಾರೆ.ಈ ವಿಷಯ ತಿಳಿದು ತಿರುನಾರಾಯಣಪುರದ ಆಯಿ ಮತ್ತು ತಿರುನಾರಾಯಣಪುರದ ಪಿಳ್ಳೈ ಇತರರು ನಾಲೂರ್ ಅಚ್ಜಾನ್ ಪಿಳ್ಳೈ ಹಾಗೂ ತಿರುಮಲೈ ಆೞ್ವಾರನ್ನು ತಿರುನಾರಾಯಣಪುರಕ್ಕೆ ಬಂದು, ಅಲಿದ್ದುಕೊಂಡು ಕಾಲಕ್ಷೇಪ ಮಾಡಿದರೆ ಹಾಗೆಯೇ ಎಲ್ಲರೂ ಕಲಿಯಬಹುದೆಂದು ವಿನಂತಿಸಿಕೊಂಡರು. ವಿನಂತಿಯನ್ನು ಒಪ್ಪಿಕೊಂಡು ನಾಲೂರ್ ಆಚ್ಜಾನ್ ಪಿಳ್ಳೈ ಮತ್ತು ತಿರುಮಲೈ ಆೞ್ವಾರ್ ಅವರು ತಿರುನಾರಾಯಣಪುರಕ್ಕೆ ಹೋಗಿ, ಅಲ್ಲಿ ಎಂಪೆರುಮಾನಾರ್, ಯದುಗಿರಿ ನಾಚ್ಚಿಯಾರ್, ಸೆಲ್ವ ಪಿಳ್ಳೈ, ತಿರುನಾರಣನ್ ಅವರಿಗೆಲ್ಲಾ ಮಂಗಳಾಶಾಸನವನ್ನುಮಾಡಿ ಕಾಲಕ್ಷೇಪವನ್ನು ಸಂಪೂರ್ಣವಾಗಿ ನಿರ್ವಹಿಸುತ್ತಾರೆ. ಅಲ್ಲಿ ತಿರುಮಲೈ ಆೞ್ವಾರ್ ಈಡನ್ನು ಪೂರ್ಣ ಆಳದಿಂದ ಕಲಿಯುತ್ತಾರೆ. ಅವರ ಸೇವಾ ಮನೋಭಾವವನ್ನು ನೋಡಿ ನಾಲೂರ್ ಆಚ್ಚಾನ್ ಪಿಳ್ಳೈ ಅವರಿಗೆ ಅತ್ಯಂತ ಸಂತೋಷವಾಯತು. ಅವರು ತಮ್ಮ ತಿರು ಆರಾಧನ ಮೂರ್ತಿ (ಇನವಾಯರ್ ತಲೈವನ್) ಅವರನ್ನು ತಿರುಮಲೈ ಆೞ್ವಾರ್ಗೆ ಕೊಡುತ್ತಾರೆ.ಹೀಗೆ ಈಡು 36000 ಪಡಿ ನಾಲೂರ್ ಆಚ್ಜಾನ್ ಪಿಳ್ಳೈ ಯಿಂದ ೩ ಮಹಾನ್ ವಿದ್ವಾಂಸರ ಮೂಲಕ ಪ್ರಚಾರಗೊಂಡಿತು.- ತಿರುಮಲೈ ಆೞ್ವಾರ್, ತಿರುನಾರಾಯಣಪುರತ್ತು ಆಯಿ ಮತ್ತು ತಿರುನಾರಾಯಣಪುರತ್ತು ಪಿಳ್ಳೈ.
ತಿರುಮಲೈ ಆೞ್ವಾರ್ ನಂತರ ಆೞ್ವಾರ್ ತಿರುನಗರಿಗೆ ಹೋಗಿ, ಅಲ್ಲಿ ಶಾಶ್ವತವಾಗಿ ವಾಸಿಸಲು ನಿರ್ಧರಿಸಿದರು. ನಮ್ಮಾೞ್ವಾರ್ ಈ ಸ್ಥಳವನ್ನು ತೊರೆದಾಗಿನಿಂದ ಆೞ್ವಾರ್ ತಿರುನಗರಿ ಕಾಡಿನಂತೆ ಮಾರ್ಪಟ್ಟಿದೆ ಎಂದು ಅವರು ಕಂಡುಕೊಂಡರು.ಅವರು ಮೊದಲು ಅಲ್ಲಿಗೆ ಬಂದು ಎಲ್ಲಾ ಪೊದೆಗಳು ಮತ್ತು ಕಾಡುಗಳನ್ನು ತೆರವುಗೊಳಿಸಿದರು. ಆೞ್ವಾರ್ ತಿರುನಗರಿಯನ್ನು ಅದರ ಸುಂದರ ಆಕಾರಕ್ಕೆ ಮರಳಿ ತಂದರು. ಅವರನ್ನು “ಕಾಡು ವೆಟ್ಟಿ ಗುರು” (ಏಕೆಂದರೆ ಅವರು ಅರಣ್ಯವನ್ನು ತೆರವುಗೊಳಿಸಿದ ಅಚಾರ್ಯರು) ಎಂದು ಪ್ರಸಿದ್ಧಗೊಳಿಸಲಾಯಿತು. ನಂತರ ಅವರು ನಮ್ಮಾೞ್ವಾರ್ ಅನ್ನು ತಿರುಕ್ಕಣಂಬಿಯಿಂದ (ಕೇರಳದಲ್ಲಿ) ಆೞ್ವಾರ್ ತಿರುನಗರಿಗೆ ಕರೆದುಕೊಂಡು ಬಂದರು. ಅಲ್ಲಿ ದೇವಾಲಯದ ಪೂಜೆಯನ್ನು ಪುನಃ ಸ್ಥಾಪಿಸುತ್ತಾರೆ.ಅವರು ಆೞ್ವಾರ್ ತಿರುನಗರದ ಪಶ್ಚಿಮ ಭಾಗದಲ್ಲಿ ಎಂಪೆರುಮಾನಾರ್
(ಭವಿಷ್ಯದ ಆಚಾರ್ಯನ್ ತಿರುಮೇನಿ ವಿಗ್ರಹವನ್ನು ನಮ್ಮಾೞ್ವಾರ್ ಬಹಳ ಹಿಂದೆಯೇ ನೀಡಿದ್ದರು) ಅವರಿಗಾಗಿ ದೇವಾಲಯವನ್ನು ಸ್ಥಾಪಿಸಿದರು , ಚತುರ್ವೇದಿ ಮಂಗಲಂ (ದೇವಾಲಯದ ಸುತ್ತ 4 ಬೀದಿಗಳು) ಮತ್ತು 10 ಕುಟುಂಬಗಳ ಗುಂಪನ್ನು ಸ್ಥಾಪಿಸಿದರು. ದೇವಾಲಯದ ಕೈಂಕರ್ಯಂಗಳನ್ನು ನೋಡಿಕೊಳ್ಳಲು, ವಿಧವೆಯಾಗಿದ್ದ ಶ್ರೀ ವೈಷ್ಣವ ಅಮ್ಮಯಾರ್ ಅವರನ್ನು ಆಯ್ಕೆ ಮಾಡಿದರು.ತಿರುಮಲೈ ಆೞ್ವಾರ್ ಅವರು,ಸದಾ ನಮ್ಮಾೞ್ವಾರ್ ಅನ್ನು ವೈಭವೀಕರಿಸುವುದು ಮತ್ತು ತಿರುವಾಯ್ಮೊೞಿ ಬೋಧನೆ ಮಾಡುವುದರಿಂದ ಅವರನ್ನು ತಿರುವಾಯ್ಮೊೞಿ ಪಿಳ್ಳೈ ಎಂದು ಕರೆಯಲಾಯಿತು,
ಸ್ವಲ್ಪ ಸಮಯದ ನಂತರ, ತಿರುವಾಯ್ಮೊೞಿ ಪಿಳ್ಳೈ ಅವರು ತಿರುವನಂತಪುರಕ್ಕೆ ಹೋಗಿ ವಿಳಾಂಜೋಲೈ ಪಿಳ್ಳೈ ಅವರಿಂದ ಎಲ್ಲಾ ರಹಸ್ಯ ಗ್ರಂಥಗಳನ್ನು ಕಲಿಯಲು ನಿರ್ಧರಿಸಿದರು.ವಿಳಾಂಜೋಲೈ ಪಿಳ್ಳೈ ಅವರು ಸದಾ ತನ್ನ ಆಚಾರ್ಯನ ಧ್ಯಾನ ಮಾಡುತ್ತಿದ್ದರು. ತಿರುವಾಯ್ಮೊೞಿ ಪಿಳ್ಳೈಯನ್ನು ಸಂತೋಷದಂದ ಸ್ವೀಕರಿಸಿ ಅವರಿಗೆ ಎಲ್ಲಾ
ಆಳವಾದ ಅರ್ಥಗಳನ್ನು ಕಲಿಸಿ ಅವರನ್ನು ಸಂಪೂರ್ಣವಾಗಿ ಆಶೀರ್ವದಿಸಿದರು.ಅದರ ನಂತರ ತಿರುವಾಯ್ಮೊೞಿ ಪಿಳ್ಳೈ ಆೞ್ವಾರ್ ತಿರುನಗರಿಗೆ ಹಿಂದಿರುಗಿದರು. ನಂತರ ವಿಳಾಂಜೋಲೈ ಪಿಳ್ಳೈ ಅವರು, ತನ್ನ ಅಚಾರ್ಯರಿಗೆ ನಿತ್ಯ ವಿಭೂತಿಯಲ್ಲಿ ಶಾಶ್ವತವಾಗಿ ಸೇವೆ ಸಲ್ಲಿಸಲು ತನ್ನ ಚರಮ ತಿರುಮೇನಿಯನ್ನು ತ್ಯಜಿಸಿದರು. ಇದನ್ನು ಕೇಳಿದ ತಿರುವಾಯ್ಮೊೞಿ ಪಿಳ್ಳೈ ಅವರಿಗಾಗಿ ಎಲ್ಲಾ ಚರಮ ಕೈಂಕರ್ಯಗಳನ್ನು ನಿರ್ವಹಿಸಿದರು.
ಸ್ವಲ್ಪ ಸಮಯದ ನಂತರ ಪೆರಿಯ ಪೆರುಮಾಳ್ ಅವರು ಆದಿಶೇಷನನ್ನು ಈ ಸಂಸಾರದಲ್ಲಿ ಮತ್ತೆ ಕಾಣಿಸಿಕೊಂಡು ಜೀವಾತ್ಮರನ್ನು ಪರಮಪದಕ್ಕೆ ಕರೆದುಕೊಂಡು ಹೋಗಲು ಆದೇಶಿಸಿದರು. ತನ್ನ ಸ್ವಾಮಿಯ ಆದೇಶವನ್ನು ಸ್ವೀಕರಿಸಿ, ತಿರುಅನಂತಾೞ್ವಾನ್(ಆದಿಶೇಷ) ಈ ಭೂಮಿಯಲ್ಲಿ ತಿಗೞಕ್ಕಿಡಂದಾನ್ ತಿರುನಾವೀರುಡಯ ಪಿರಾನ್ ( ಎಂಪೆರುಮಾನಾರ್ ಸ್ಥಾಪಿಸಿದ ೭೪ ಪೀಠಾಧಿಪತಿಗಳಲ್ಲಿ ಒಬ್ಬರಾದ ಗೋಮಡತ್ತಾೞ್ವಾನ್ ಅವರ ಗುರು ಪರಂಪರೆಗೆ ಸೇರಿದವರು) ಮತ್ತು ಶ್ರೀ ರಂಗ ನಾಚ್ಜಿಯಾರ್ ಅವರ ಮಗನಾಗಿ ಐಪಸಿ ತಿರುಮೂಲಮ್ ದಿನ ಆೞ್ವಾರ್ ತಿರುನಗರಿಯಲ್ಲಿ, ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಆಗಿ ಜನಿಸಿದರು. (ಮುಂದೆ ಅವರನ್ನು ಅೞಗಿಯ ಮಣವಾಳ ಮಾಮುನಿಗಳ್ ಎಂದು ಕರೆಯಲಾಯಿತು) ಅವರು ಬಾಲ್ಯವನ್ನು ಸ್ವಲ್ಪ ಕಾಲ ತಾಯಿಯ ಊರು ಸಿಕ್ಕಿಲ್ ಕಿಡಾರಂ ಅಲ್ಲಿ ಕಳೆದರು. ತಂದೆಯಿಂದ ಸಾಮಾನ್ಯ ಶಾಸ್ತ್ರಗಳನ್ನು ಮತ್ತು ವೇದ ಅಧ್ಯಯನಗಳನ್ನು ಕಲಿತರು.ತಿರುವಾಯ್ಮೊೞಿ ಪಿಳ್ಳೈ ಅವರ ಬಗ್ಗೆ ಕೇಳಿದಾಗ, ಅೞಗಿಯ ಮಾಣವಾಳ ಪೆರುಮಾಳ್ ನಾಯನಾರ್ ಅವರು ಆೞ್ವಾರ್ ತಿರುನಗರಿಗೆ ಹಿಂತಿರುಗಿ, ಅವರ ಶಿಷ್ಯರಾದರು.ಆಚಾರ್ಯರ ಸೇವೆ ಮಾಡುತ್ತಾ ಅವರಿಂದ ಸಂಪೂರ್ಣವಾಗಿ ಅರುಳಿಚೆಯಲ್ ಮತ್ತು ಅದರ ಅರ್ಥಗಳನ್ನು ಕಲಿತರು. ತಿರುವಾಯ್ಮೊೞಿ ಪಿಳ್ಳೈ ಅವರ ಮಾರ್ಗದರ್ಶನದಲ್ಲಿ ಅವರು ಭವಿಷ್ಯದಾಚಾರ್ಯರಿಗೆ ಅತ್ಯಂತ ಪ್ರೀತಿ ಮತ್ತು ಸಮರ್ಪಣೆಯೊಂದಿಗೆ ತಿರುವಾರಾಧಾನವನ್ನು ನಿರ್ವಹಿಸಿದರು ಮತ್ತು ಎಂಪೆರುಮಾನಾರವರನ್ನು ವೈಭವೀಕರಿಸುತ್ತಾ ‘ಯತಿರಾಜ ವಿಂಶತಿ’ ಎನ್ನುವ ಶ್ಲೋಕವನ್ನು ಸಂಯೋಜಿಸಿದರು. ತಿರುವಾಯ್ಮೊೞಿ ಪಿಳ್ಳೈ ಅವರ ಕೆಲವು ಶಿಷ್ಯರು ತಮ್ಮ ಆಚಾರ್ಯರು ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರ ಮೇಲೆ ಇಟ್ಟಿರುವ ಅತ್ಯಂತ ಪ್ರೀತಿಯನ್ನು ನೋಡಿ ಆಶ್ಚರ್ಯಪಟ್ಟಾಗ, ತಿರುವಾಯ್ಮೊೞಿ ಪಿಳ್ಳೈ ಅದನ್ನು ಅರ್ಥಮಾಡಿಕೊಂಡು ಅವರಿಗೆ “ ಅವರು ಬೇರೆ ಯಾರೂ ಅಲ್ಲ, ಸಾಕ್ಷಾತ್ ಆದಿಶೇಷ” ಎಂದು ವಿವರಿಸಿದರು.
ಅವರ ಜೀವನದ ಅಂತಿಮ ವೇಳೆಗೆ ತಿರುವಾಯ್ಮೊೞಿ ಪಿಳ್ಳೈ ತನ್ನ ಕಾಲದ ನಂತರ , ಉತ್ತರಾಧಿಕಾರಿಯ ಬಗ್ಗೆ ಚಿಂತಿಸಲು ಪ್ರಾರಂಭಿಸಿದರು. ಆ ಸಮಯದಲ್ಲಿ, ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರು ಆ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುವುದಾಗಿ ಮತ್ತು ಅವರ ಆಸೆಗಳನ್ನ ಈಡೇರಿಸುವುದೆಂದು ಪ್ರತಿಜ್ಞೆ ಮಾಡುತ್ತಾರೆ. ತಿರುವಾಯ್ಮೊೞಿ ಪಿಳ್ಳೈ ಅವರು ಬಹಳ ಸಂತೋಷಪಟ್ಟರು.ತಕ್ಷಣ ಶ್ರೀ ಭಾಷ್ಯವನ್ನು ಕಲಿಯಬೇಕು, ಆದರೆ ಗಮನವನ್ನು ಸಂಪೂರ್ಣವಾಗಿ ತಿರುವಾಯ್ಮೊೞಿ ಮತ್ತು ಅದರ ವ್ಯಾಖ್ಯಾನ ನೀಡುವುದರಲ್ಲಿ ಇಡಬೇಕು ಮತ್ತು ಜೀವನವನ್ನು ಶ್ರೀರಂಗದ ಪೆರಿಯಪೆರುಮಾಳಿಗೆ ಮಂಗಳಾಶಾಸನವನ್ನು ಮಾಡುವುದರಲ್ಲಿಯೇ ಕಳಿಯಬೇಕೆಂದು ಹೇಳಿದರು.ಮತ್ತು ತನ್ನ ಶಿಷ್ಯರು ಅೞಗಿಯ ಮಣವಾಳ ಪೆರುಮಾಳ್ ನಾಯನಾರಲ್ಲಿ ಹೆಚ್ಚು ಗೌರವವನ್ನು ಹೊಂದಿರಬೇಕು ಮತ್ತು ಅವರನ್ನು ವಿಶೇಷ ಅವತಾರವೆಂದು ಪರಿಗಣಿಸಬೇಕೆಂದು ಸೂಚಿಸುತ್ತಾರೆ. ಅದರ ನಂತರ, ಪಿಳ್ಳೈ ಲೋಕಾಚಾರ್ಯರ ಪಾದಗಳನ್ನು ಧ್ಯಾನಿಸುತ್ತಾ, ತಿರುವಾಯ್ಮೊೞಿ ಪಿಳ್ಳೈ ತಮ್ಮ ಚರಮ ದೇಹವನ್ನು ಬಿಟ್ಟು ಪರಮಪದವನ್ನು ತಲುಪಿದರು,ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಮತ್ತು ಇತರ ಶಿಷ್ಯರು ಅವರ ಚರಮ ಕೈಂಕರ್ಯವನ್ನು ಭವ್ಯವಾಗಿ ನಿರ್ವಹಿಸುತ್ತಾರೆ.
ಎಂಪೆರುಮಾನಾರ್ ಅವರು ಹೇಗೆ ಪೆರಿಯ ನಂಬಿ ( ಪರಾಂಕುಶ ದಾಸರ್) ಅವರಲ್ಲಿ ಆಶ್ರಯಗೊಂಡಿದ್ದರೋ, ಹಾಗೆ ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರು ತಿರುವಾಯ್ಮೊೞಿ ಪಿಳ್ಳೈ(ಶಠಗೋಪ ದಾಸರ್)ಅವರಲ್ಲಿ ಆಶ್ರಯಗೊಂಡಿದ್ದರು..
ಅವರ ಪ್ರಯತ್ನದಿಂದಲೇ ನಾವು ಆೞ್ವಾರ್ ತಿರುನಗರಿಯನ್ನು ಅದರ ಪ್ರಸ್ತುತ ಆಕಾರದಲ್ಲಿ ಆದಿನಾಥರ್ ಆೞ್ವಾರ್ ದೇವಾಲಯ ಮತ್ತು ಭವಿಷ್ಯದಾಚಾರ್ಯರ (ಎಂಪೆರುಮಾನಾರ್) ದೇವಾಲಯದೊಂದಿಗೆ ನೋಡುತ್ತೇವೆ.
ತಿರುವಾಯ್ಮೊೞಿ ಪಿಳ್ಳೈ ಅವರು ತಮ್ಮ ಜೀವನವನ್ನು ನಮ್ಮಾೞ್ವಾರ್ ಮತ್ತು ತಿರುವಾಯ್ಮೊೞಿಗಾಗಿ ಮೀಸಲಿಟ್ಟರು. ಅವರು ತಮ್ಮ ಆಚಾರ್ಯ, ಪಿಳ್ಳೈ ಲೋಕಾಚಾರ್ಯರ ಸಲಹೆಯ ಪ್ರಕಾರ ಅನೇಕ ಸ್ಥಳಗಳಿಗೆ ಹೋಗಿ ಅನೇಕ ಆಚಾರ್ಯರಿಂದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಕೊನೆಯಲ್ಲಿ ಅವೆಲ್ಲವನ್ನು ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ( ಮುಂದೆ ಅೞಗಿಯ ಮಣವಾಳ ಮಾಮುನಿಗಳ್) ಅವರಿಗೆ ನೀಡಿದರು.ಅಲ್ಲದೆ, ತಿರುವಾಯ್ಮೊೞಿ ಪಿಳ್ಳೈ ಅವರ ಪ್ರಯತ್ನದಿಂದ
ನಾವು ಈಡು 36000 ಪಡಿ ವ್ಯಾಖ್ಯಾನವನ್ನು- ಸ್ವೀಕರಿಸಿದ್ದೇವೆ ಮತ್ತು ಅೞಗಿಯ ಮಣವಾಳ ಮಾಮುನಿಯವರಿಂದ ಈ ಈಡು ವ್ಯಾಖ್ಯಾನ ಅತ್ಯಂತ ಪ್ರಚಾರಗೊಂಡಿತು.
ನಮ್ಮೆಲ್ಲರಿಗೂ ಎಂಪೆರುಮಾನಾರ್ ಮತ್ತು ಅಸ್ಮದ್ ಆಚಾರ್ಯರ ಬಳಿ ಅತ್ಯಂತ ಭಕ್ತಿ, ಪ್ರೀತಿ ಮತ್ತು ವಿಶ್ವಾಸ ಅನುಗ್ರಹಿಸಲಿ ಎಂದು ತಿರುವಾಯ್ಮೊೞಿ ಪಿಳ್ಳೆೈ ಅವರ ಕಮಲ ಪಾದಗಳಲ್ಲಿ ಪ್ರಾರ್ಥಿಸೋಣ.
ತಿರುವಾಯ್ಮೊೞಿ ಪಿಳ್ಳೈ ತನಿಯನ್.
ನಮಃ ಶ್ರೀಶೈಲ ನಾಥಾಯ ಕುಂತೀನಗರ ಜನ್ಮಣೇ
ಪ್ರಸಾದಲಬ್ಧ ಪರಮ ಪ್ರಾಪ್ಯ ಕೈಂಕರ್ಯಶಾಲಿನೇ!
ನಮ್ಮ ಮುಂದಿನ ಲೇಖನದಲ್ಲಿ ಅೞಗಿಯ ಮಣವಾಳ ಮಾಮುನಿಗಳ ಪ್ರಭಾವವನ್ನು ನೋಡೋಣ.
ಅಡಿಯೇನ್ ರಾಮಾನುಜ ದಾಸಿ ರೂಪ
ಸಂಗ್ರಹ – https://guruparamparai.koyil.org/2012/09/19/thiruvaimozhi-pillai-english/
ರಕ್ಷಿತ ಮಾಹಿತಿ: https://guruparamparai.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org
.