ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ:
ಹಿಂದಿನ ಲೇಖನದಲ್ಲಿ (https://guruparamparai.koyil.org/2015/08/06/introduction/), ನಾವು ಗುರುಪರಂಪರೆಯ ಬಗ್ಗೆ ವಿಚಾರ ಮಾಡಲು ಆರಂಭಿಸಿದ್ದೇವೆ.
ಆಳ್ವಾರ್ ಮತ್ತು ಆಚಾರ್ಯರು – ಶ್ರೀ ರಾಮಾನುಜಾಚಾರ್ಯರ ಸುತ್ತಲು
ಶ್ರಿಯಃಪತಿಯಾದ ಶ್ರೀಮನ್ ನಾರಾಯಣನು (ಶ್ರೀ ಮಹಾಲಕ್ಷ್ಮಿಯ ಪತಿ) ಸಂಪೂರ್ಣ ಮಂಗಳಕರ ಗುಣವುಳ್ಳುವವನು. ಸದಾಕಾಲ ಶ್ರೀವೈಕುಂಠದಲ್ಲಿ ದಿವ್ಯ ಪತ್ನಿಯರೊಡನೆ (ಶ್ರೀದೇವಿ, ಭೂದೇವಿ, ನೀಳಾದೇವಿ) ವಾಸಿಸುವ ಶ್ರೀಮನ್ ನಾರಾಯಣನ ಸೇವೆಮಾಡಲು, ಅನಂತ, ಗರುಡ, ವಿಷ್ವಕ್ಸೇನ ಇತ್ಯಾದಿ ನಿತ್ಯಸೂರಿಗಳು ನಿರಂತರವಾಗಿ ಅವನ ಸುತ್ತಲು ಇರುತ್ತಾರೆ. ಆದರೆ ಈ ಸುಖವನ್ನು ಅನುಭವಿಸುವ ನಾರಾಯಣನ ಹೃದಯ ಸಂಸಾರದಲ್ಲಿರುವ ಜೀವಾತ್ಮಗಳೊಡನೆ ಸದಾಕಾಲ ಉಪಸ್ಥಿತವಾಗಿರುತ್ತದೆ (ಜೀವಾತ್ಮಗಳು ಇಲ್ಲಿ ನರಳುತ್ತಿರುವ ಕಾರಣದಿಂದ).
ಎಲ್ಲಾ ಜೀವಾತ್ಮಗಳು
ಅ) ನಿತ್ಯನ್ – ಯಾವಾಗಲು ಪರಮಪದದಲ್ಲಿ ಇರುವ,
ಆ) ಮುಕ್ತನ್ – ಸಂಸಾರದಲ್ಲಿ ಇದ್ದು ವಿಮುಕ್ತನಾಗಿರುವ,
ಇ) ಬದ್ಧನ್ – ಸಂಸಾರದಲ್ಲಿ ಇರುವ, ಕರ್ಮದಿಂದ ಬದ್ಧನಾಗಿರುವ, ಎಂಪೆರುಮಾನಿಗೆ ಅಧೀನರಾಗಿ ಅವರೊಡನೆ ಅದೇ ಸಂಬಂಧವನ್ನು ಹಂಚಿಕೊಳ್ಳುತ್ತಾರೆ (ಸ್ವಾಮಿ – ಸ್ವಾಮ್ಯದ ಮತ್ತು ಪ್ರಮುಖ್ಯವಾಗಿ ಪಿತ್ರು – ಪುತ್ರ ಸಂಬಂಧ). ಈ ಸಂಬಂಧ ಇರುವ ಕಾರಣದಿಂದ ಎಂಪೆರುಮಾನ್ ಬದ್ಧ ಜೀವಾತ್ಮಗಳನ್ನು ಶ್ರೀವೈಕುಂಠಕ್ಕೆ ಕರಿಸಿ ನಿರಂತರ ಕೈಂಕರ್ಯದಲ್ಲಿ ತೊಡಗಿಸಲು ಸತತವಾಗಿ ಸಹಾಯ ನೀಡುತ್ತಾನೆ.
ಶಾಸ್ತ್ರಗಳು ವಿವರಿಸುವಂತೆ ಮೋಕ್ಷ ಪಡೆಯಲು ಮನುಷ್ಯನಿಗೆ ನಿಜವಾದ ಜ್ಞಾನವಿರಬೇಕು. ಈ ಜ್ಞಾನವನ್ನು ರಹಸ್ಯತ್ರಯದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಜೀವಾತ್ಮವನ್ನು ಬಂಧನದಿಂದ ಮುಕ್ತ ಮಾಡುವ ಈ ಜ್ಞಾನವನ್ನು ಆಚಾರ್ಯರಿಂದ ಪಡೆಯಬೇಕು. ಆಚಾರ್ಯನ ಸ್ಥಾನವು ಮಹಿಮಾನ್ವಿತನಾಗಿರುವುದರಿಂದ ಎಂಪೆರುಮಾನ್ ಸ್ವತಃ ಪ್ರಥಮ ಆಚಾರ್ಯರ ಸ್ಥಾನದಲ್ಲಿದ್ದಾರೆ. ನಮ್ಮ ಪೂರ್ವಾಚಾರ್ಯರು ಎಂಪೆರುಮಾನ್ ಮೂರು ಸ್ಥಳಗಳಲ್ಲಿ ಆಚಾರ್ಯನ ಸ್ಥಾನವನ್ನು ತೆಗೆದುಕೊಂಡಿದ್ದಾರೆ ಎಂದು ವಿವರಿಸುತ್ತಾರೆ:
- ಎಂಪೆರುಮಾನ್ ಬದರಿಕಾಶ್ರಮದಲ್ಲಿ ನಾರಾಯಣಋಷಿ (ಆಚಾರ್ಯ) ರೂಪವನ್ನು ಧರಿಸಿ ತಿರುಮಂತ್ರವನ್ನು ಅವರ ಮತ್ತೊಂದು ಅವತಾರ – ನರಋಷಿಯವರಿಗೆ (ಶಿಷ್ಯ) ಶ್ರುತಪಡಿಸಿದರು
- ಎಂಪೆರುಮಾನ್ ವಿಷ್ಣುಲೋಕದಲ್ಲಿ ಪೆರಿಯಪಿರಾಟ್ಟಿಯವರಿಗೆ (ಶ್ರೀದೇವಿ ನಾಚ್ಚಿಯಾರ್) ದ್ವಯ ಮಹಾಮಂತ್ರವನ್ನು ಶ್ರುತಪಡಿಸಿದರು (ಹಾಗೆ ನಮ್ಮ ಶ್ರೀವೈಷ್ಣವ ಗುರುಪರಂಪರೆಯನ್ನು ಆರಂಭಿಸಿ)
- ಎಂಪೆರುಮಾನ್ ಪಾರ್ಥಸಾರಥಿಯಾಗಿ ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಚರ್ಮ ಶ್ಲೋಕವನ್ನು ಶ್ರುತಪಡಿಸಿದರು
ವಿಸ್ತಾರವಾದ ಗುರು ಪರಂಪರಾ ರೇಖಾಚಿತ್ರವನ್ನು ವೀಕ್ಷಿಸಿ:
ತಿರುವರಂಗದಲ್ಲಿ ಪೆರಿಯ ಪೆರುಮಾಳ್ ಮತ್ತು ಪೆರಿಯಪಿರಾಟ್ಟಿ, ಶ್ರೀಮನ್ ನಾರಾಯಣ ಮತ್ತು ಮಹಾಲಕ್ಷ್ಮಿಯಂತೆ. ಪೆರಿಯಪೆರುಮಾಳ್ ಇಂದ ಆರಂಭಿಸಿ, ನಮ್ಮ ಓರಾಣ್ವಳಿ ಗುರು ಪರಂಪರಾ ಕೆಳಗಿನ ಕ್ರಮಪಟ್ಟಿಯಲ್ಲಿ ತೋರಿಸಲಾಗಿದೆ:
- ಪೆರಿಯ ಪೆರುಮಾಳ್ (ಶ್ರೀಮನ್ ನಾರಾಯಣ)
- ಪೆರಿಯ ಪಿರಾಟ್ಟಿ (ಶ್ರೀ ಮಹಾಲಕ್ಷ್ಮಿ)
- ಸೇನೈ ಮುದಲಿಯಾರ್
- ನಮ್ಮಾಳ್ವಾರ್
- ನಾಥಮುನಿಗಳು
- ಉಯ್ಯಕ್ಕೊಂಡಾರ್
- ಮಣಕ್ಕಾಲ್ ನಂಬಿ
- ಆಳವಂದಾರ್
- ಪೆರಿಯ ನಂಬಿ
- ಎಂಪೆರುಮಾನಾರ್
- ಎಂಬಾರ್
- ಭಟ್ಟರ್
- ನಂಜೀಯರ್
- ನಮ್ಪಿಳ್ಳೈ
- ವಡಕ್ಕು ತಿರುವೀಧಿಪಿಳ್ಳೈ
- ಪಿಳ್ಳೈ ಲೋಕಾಚಾರ್ಯರ್
- ತಿರುವಾಯ್ಮೊಳಿಪಿಳ್ಳೈ
- ಅಳಗಿಯ ಮಣವಾಳ ಮಾಮುನಿಗಳ್
ಆಳ್ವಾರುಗಳು ಮಾತು ಹಲವಾರು ಆಚಾರ್ಯರು ಸಹ ನಮ್ಮ ಶ್ರೀವೈಷ್ಣವ ಗುರುಪರಂಪರೆಯ ಭಾಗವೆಂದು ಪರಿಗಣಿಸಲಾಗುತ್ತದೆ.
ಆಳ್ವಾರುಗಳು ಕ್ರಮದಲ್ಲಿ:
- ಪೊಯ್ಗೈ ಆಳ್ವರ್
- ಭೂತತ್ತಾಳ್ವಾರ್
- ಪೇಯ್ ಆಳ್ವಾರ್
- ತಿರುಮಳಿಶೈ ಆಳ್ವಾರ್
- ಮಧುರಕವಿ ಆಳ್ವಾರ್
- ನಮ್ಮಾಳ್ವಾರ್
- ಕುಲಶೇಕರಾಳ್ವಾರ್
- ಪೆರಿಯಾಳ್ವಾರ್
- ಆಂಡಾಳ್
- ತೊಂಡರಡಿಪ್ಪೊಡಿ ಆಳ್ವಾರ್
- ತಿರುಪ್ಪಾಣಾಳ್ವಾರ್
- ತಿರುಮಂಗೈ ಆಳ್ವಾರ್
ಆಚಾರ್ಯರು (ಓರಾಣ್ವಳಿ ಗುರುಪರಂಪರೆಯಲ್ಲಿ ಇಲ್ಲದ)
- ಸೆಲ್ವ ನಂಬಿ
- ಕುರುಗೈ ಕಾವಲಪ್ಪನ್
- ತಿರುಕ್ಕಣ್ಣಮಂಗೈ ಆಂಡಾನ್
- ತಿರುವರಂಗಪ್ಪೆರುಮಾಳ್ ಅರೆಯರ್
- ತಿರುಕ್ಕೋಷ್ಠಿಯೂರ್ ನಂಬಿ
- ಪೆರಿಯ ತಿರುಮಲೈ ನಂಬಿ
- ತಿರುಮಾಲೈ ಆಂಡಾನ್
- ತಿರುಕ್ಕಚ್ಚಿ ನಂಬಿ
- ಮಾರನೇರಿ ನಂಬಿ
- ಕೂರತ್ತಾಳ್ವಾನ್
- ಮುದಲಿಯಾಂಡಾನ್
- ಅರುಳಾಳ ಪೆರುಮಾಳ್ ಎಂಪೆರುಮಾನಾರ್
- ಕೋಯಿಲ್ ಕೋಮಾಣ್ಡೂರ್ ಇಳಯವಿಲ್ಲಿ ಆಚ್ಚಾನ್
- ಕಿಡಾಂಬಿ ಆಚ್ಚಾನ್
- ವಡುಗ ನಂಬಿ
- ವಂಗಿ ಪುರತು ನಂಬಿ
- ಸೋಮಾಸಿ ಆಂಡಾನ್
- ಪಿಳ್ಳೈ ಉರಂಗಾವಿಲ್ಲಿ ದಾಸರ್
- ತಿರುಕ್ಕುರುಗೈಪ್ಪಿರಾನ್ ಪಿಳ್ಳಾನ್
- ಕೂರ ನಾರಾಯಣ ಜೀಯರ್
- ಎಂಗಳಾಳ್ವಾನ್
- ಅನಂದಾಳ್ವಾನ್
- ತಿರುವರಂಗತ್ತು ಅಮುಧನಾರ್
- ನಡಾತೂರ್ ಅಮ್ಮಾಳ್
- ವೇದ ವ್ಯಾಸ ಭಟ್ಟರ್
- ಶ್ರುತ ಪ್ರಕಾಶಿಕಾ ಭಟ್ಟರ್ (ಸುದರ್ಶನ ಸೂರಿ)
- ಪೆರಿಯವಾಚ್ಚಾನ್ ಪಿಳ್ಳೈ
- ಈಳುಣ್ಣಿ ಮಾಧವ ಪೆರುಮಾಳ್
- ಈಳುಣ್ಣಿ ಪಧ್ಮನಾಭ ಪೆರುಮಾಳ್
- ನಾಲೂರ್ ಪಿಳ್ಳೈ
- ನಾಲೂರಾಚ್ಚಾನ್ ಪಿಳ್ಳೈ
- ನಡುವಿಲ್ ತಿರುವೀಧಿ ಪಿಳ್ಳೈ ಭಟ್ಟರ್
- ಪಿನ್ಬಳಗಿಯ ಪೆರುಮಾಳ್ ಜೀಯರ್
- ಅಳಗಿಯ ಮಣವಾಳ ಪೆರುಮಾಳ್ ನಾಯನಾರ್
- ನಾಯನಾರಾಚ್ಚಾನ್ ಪಿಳ್ಳೈ
- ವಾಧಿ ಕೇಸರಿ ಅಳಗಿಯ ಮಣವಾಳ ಜೀಯರ್
- ಕೂರ ಕುಲೋತ್ತಮ ದಾಸರ್
- ವಿಳಾಂಚೋಲೈ ಪಿಳ್ಳೈ
- ವೇದಾನ್ತಾಚಾರ್ಯರ್
- ತಿರುನಾರಾಯಣಪುರಂ ಆಯಿ ಜನನ್ಯಾಚಾರ್ಯರ್
ಮಣವಾಳ ಮಾಮುನಿಗಳ ನಂತರ (ಮತ್ತು ಅದೇ ಸಮಯದಲ್ಲಿ) ಅನೇಕ ಮಹಿಮಾನ್ವಿತ ಆಚಾರ್ಯರು ನಮ್ಮ ಸಂಪ್ರದಾಯದಲ್ಲಿ ಕಾಣಬಹುದು (ಕೆಳಗಿನಪಟ್ಟಿಗೆ ಸೀಮಿತವಿಲ್ಲ):
- ಪೊನ್ನಡಿಕ್ಕಾಲ್ ಜೀಯರ್
- ಕೋಯಿಲ್ ಕಂದಾಡೈ ಅಣ್ಣನ್
- ಪ್ರತಿವಾದಿ ಭಯಂಕರಂ ಅಣ್ಣನ್
- ಪತ್ತಂಗಿ ಪರವಸ್ತು ಪಟ್ಟರ್ಪಿರಾನ್ ಜೀಯರ್
- ಎರುಂಬಿ ಅಪ್ಪಾ
- ಅಪ್ಪಿಳ್ಳೈ
- ಅಪ್ಪಿಳ್ಳಾರ್
- ಕೋಯಿಲ್ ಕಂದಾಡೈ ಅಪ್ಪನ್
- ಶ್ರೀಪೆರುಂಭೂದೂರ್ ಆದಿ ಯತಿರಾಜ ಜೀಯರ್
- ಅಪ್ಪಾಚಿಯಾರಣ್ಣಾ
- ಪಿಳ್ಳೈ ಲೋಕಂ ಜೀಯರ್
- ತಿರುಮಳಿಶೈ ಅಣ್ಣಾವಪ್ಪಂಗಾರ್
- ಅಪ್ಪನ್ ತಿರುವೇಂಕಟ ರಾಮಾನುಜ ಎಂಬಾರ್ ಜೀಯರ್ ಮತ್ತು ಇತರರು
ಮುಂದಿನ ಲೇಖನಗಳಲ್ಲಿ ನಮ್ಮ ಆಚಾರ್ಯರ ಜೀವನದ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಳ್ಳೋಣ.
ಅಡಿಯೇನ್ ರಾಮಾನುಜನ್ ಮಧುರಕವಿ ರಾಮಾನುಜ ದಾಸನ್
ಮೂಲ: https://guruparamparai.koyil.org/2012/08/17/introduction-contd/
ರಕ್ಷಿತ ಮಾಹಿತಿ: https://guruparamparai.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://srivaishnavagranthams.wordpress.com
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org
Grateful thanks for the invaluable service to the eager Sri Vaishnava Kannada-speaking community.
I am greatful to the work kannada lipi/bhasha to Sri Rangaswamy Iyengar
Adiyen
Very good information. hats off
Can Have Acharya Hrudayan in Kannada and Audio
Pillai Lokachariar Yamunacharya Periyavachchan Pillai Alavandar works in kannnada to learn
Acharya Hrudhayam, Sri Bhashyam in kannada
Ashta Prabandham and Parabrahma Vivekam in kannada pdf
Namaskaram,
Very informative. Really help kannada people.
Is it possible to direct me to stotra ratna by Sri yaamu acharyar?